Political newsಹುಬ್ಬಳ್ಳಿ

ಹುಬ್ಬಳ್ಳಿ ಈದ್ಗಾ ಮೈದಾನ ಗಣೇಶ ಮೂರ್ತಿ ಅದ್ದೂರಿ ವಿಸರ್ಜನೆ!

POWER CITY NEWS:HUBBALLI ಇಲ್ಲಿದೆ ವಿವರಹುಬ್ಬಳ್ಳಿ ರಾಣಿ ಚೆನ್ನಮ್ಮ ಈದ್ಗಾ ಮೈದಾನದಲ್ಲಿ ಹಿಂದೂಪರ ಸಂಘಟನೆಗಳಿಂದ ಪ್ರತಿಷ್ಠಾಪನೆ ಮಾಡಿದ ಗಣೇಶ ಮೂರ್ತಿಯನ್ನು ಇಂದು ಅದ್ದೂರಿಯಾಗಿ ವಿಸರ್ಜನೆ ಮಾಡಲಾಯಿತು. ನಾಸಿಕ್ ಡೋಲ್, ಡಿಜೆ ಮೂಲಕ ಮೈದಾನದಿಂದ ಇಂದಿರಾಗಾಂಧಿ ಗಾಜಿನ ಮನೆಯವರಿಗೆ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.

ಶಾಸಕ ಬಸನಗೌಡ‌ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಮಹೇಶ ಟೆಂಗಿನಕಾಯಿ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಹಾಗೂ ಮಹಾಮಂಡಲದ ಅಧ್ಯಕ್ಷ ಸಂಜು ಬಡಸ್ಕರ್ ಮೆರವಣಿಗೆಯಲ್ಲಿ ಭಾಗವಹಿಸಿದರು.ಹುಬ್ಬಳಿ: ಒಂದು ಕಡೆ ಗಣೇಶನ ಮೆರವಣಿಗೆ, ಮತ್ತೊಂದು ಕಡೆ ರಸ್ತೆಯುದ್ದಕ್ಕೂ ಭಗವಾ ದ್ವಜಗಳು. ಇನ್ನೊಂದು ಕಡೆ ರಸ್ತೆ ತುಂಬೆಲ್ಲ ಯುವಕರ ಕುಣಿತ. ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ. ಹೌದು, ವಿವಾದದ ಮದ್ಯೆಯೂ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲಾಗಿತ್ತು. ಮೂರು ದಿನಗಳ ಕಾಲ ಗಣೇಶ ಪ್ರತಿಷ್ಠಾಪನೆಗೆ ಮಾಹಾನಗರ ಪಾಲಿಕೆ ಅವಕಾಶ ಕೊಟ್ಟಿತ್ತು. ಕೆಲ ಷರತ್ತು ಕೂಡ ಹಾಕಿತ್ತು. ಅದರಂತೆ ಇಂದು 12 ಗಂಟೆಯೊಳಗೆ ಈದ್ಗಾ ಮೈದಾನದಿಂದ ಗಣೇಶ ಹೊರ ಬರಬೇಕು ಎನ್ನುವ ಷರತ್ತು ಹಾಕಲಾಗಿತ್ತು. ಸರಿಯಾಗಿ 11.45 ಕ್ಕೆ ಈದ್ಗಾ ಮೈದಾನದಿಂದ ಗಣೇಶನನ್ನ ಹೊರಗೆ ತರಲಾಯ್ತು. ಗಣೇಶ ಹೊರಬರುತ್ತಲೆ ಗಣೇಶ ಪ್ರೀಯರ ಕರಡಾತನ ಮುಗಿಲು ಮುಟ್ಟಿತ್ತು.

ಹುಬ್ಬಳ್ಳಿ ರಾಣಿ ಚೆನ್ನಮ್ಮ ವೃತ್ತದ ಮಾರ್ಗವಾಗಿ ಮೆರವಣಿಗೆ ಆರಂಭವಾಯಯ್ತು. ಡಿಜೆ ಸದ್ದಿಗೆ ಯುವ ಸಮೂಹ ಕುಣಿದು ಕುಪ್ಪಳಿಸಿದ್ರು. ಇನ್ನು ಈದ್ಗಾ ಮೈದಾನದ ಗಣೇಶ ವಿಸರ್ಜನೆ ವೇಳೆ ಶ್ರೀರಾಮಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ ಅರವಿಂದ ಬೆಲ್ಲದ, ಮಹೇಶ್ ಟೆಂಗಿನಕಾಯಿ ಭಾಗಿಯಾಗಿದ್ರು. ಮೆರವಣಿಗೆ ಹಿನ್ನಲೆ ಮುನ್ನೆಚ್ಚರಿಕೆ ಕ್ರಮವಾಗಿ ಡಿಸಿಪಿ, ಎಸಿಪಿ, ಇನ್ಸ್ ಪೆಕ್ಟರ್ ತಂಡ ಪ್ಯಾರಾಮಿಲಿಟರಿ ರ್ಯಾಪಿಡ್ ಆಕ್ಷನ್ ಫೋರ್ಸ್ ಸೇರಿದಂತೆ ನಗರದಾದ್ಯಂತ 5 ಸಾವಿರಕ್ಕೂ ಅಧಿಕ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು.ಇದಕ್ಕೂ ಮೊದಲು ಮಹಾಮಂಗಳಾರತಿಯಲ್ಲಿ ಪಾಲ್ಗೊಂಡ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ದೇವರ ದರ್ಶನ ಪಡೆದರು. ಬಳಿಕ ಮಾಧ್ಯಮಗಳ ಮಾತನಾಡಿದ ಅವರು, ‘ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿರೋಧಿಸುವವರು ದೇಶದ್ರೋಹಿಗಳು. ಅಂಜುಮನ್ ಸಂಸ್ಥೆಯವರ ದುರದ್ದೇಶ ಏನೆಂದು ಈಗ ಎಲ್ಲರಿಗೂ ಗೊತ್ತಾಗಿದೆ. ಇವರು ದೇಶ ವಿಭಜನೆ ಮಾಡಿದ ದ್ರೋಹಿಗಳು. ಮಸೀದಿಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ತಾಕತ್ತು ಹಿಂದೂ ಸಮಾಜಕ್ಕಿದೆ. ನಿಮ್ಮ ನಮಾಜ್‌ಗೂ ನಾವು ಅಡ್ಡಿಪಡಿಸಬೇಕಾಗುತ್ತೆ. ರಾಣಿ ಚೆನ್ನಮ್ಮ ಮೈದಾನದಲ್ಲಿ ನಮಾಜ್‌ಗೆ ಅವಕಾಶ ಕೊಡದಂತೆ ಕೋರ್ಟ್‌ಗೆ ಹೋಗುತ್ತೇವೆ.

ಇದು ಪಾಕಿಸ್ತಾನವಲ್ಲ, ನಿಮ್ಮಪ್ಪನ ಆಸ್ತಿಯಲ್ಲ. ವಿರೋಧಿಗಳ ಸೊಕ್ಕಡಗಿಸುವ ತಾಕತ್ತು ನಮಗಿದೆ ಎಂದು ವಾಗ್ದಾಳಿ ನಡೆಸಿದರು.ಒಟ್ಟಾರೆ ಮೂರು ದಿನಗಳ ಕಾಲ ವಿವಾದಿತ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪನೆ ಆಗಿದ್ದ ಗಣೇಶನಿಗೆ ಅದ್ದೂರಿಯಾಗಿ ವಿದಾಯ ಹೇಳಲಾಯ್ತು. ಅಕಸ್ಮಾತ್ ಈದ್ಗಾ ಮೈದಾನದಲ್ಲಿ ಅಂಜುಮನ್ ಕಮೀಟಿ ಶೋಕಾಚರಣೆ ಮಾಡಿದ್ರೆ,ಅದರ ಮಾರನೇ ದಿನ ನಾವು ಗೋಮುತ್ರ ಸಿಂಪಡಣೆ ಮಾಡಿ ಹನಮಾನ್ ಚಾಲೀಸಾ ಪಠಣ ಮಾಡ್ತೀವಿ ಎಂದು ಯತ್ನಾಳ್ ಎಚ್ಚರಿಕೆ ಕೊಟ್ಟಿದ್ದಾರೆ.ಇದಲ್ಲದೆ ಇನ್ನ ಮುಂದೆ ಮೈದಾನದಲ್ಲಿ ನಾವು ರಾಷ್ಟ್ರ ದ್ವಜ ಹಾರಸ್ತೀವಿ ತಾಕತ್ ಇದ್ರೆ ಕಾಂಗ್ರೆಸ್ ಸರ್ಕಾರ ತಡೀಲಿ ನೋಡೋಣ ಎಂದು ಬೆಲ್ಲದ ಸವಾಲ್ ಹಾಕೀದ್ದಾರೆ.

Related Articles

Leave a Reply

Your email address will not be published. Required fields are marked *

Back to top button